Kannada whatsapp status And quotes

Kannada whatsapp status  And quotes

Kannada whatsapp status And quotes

Kannada WhatsApp Status And Quotes

ಸೋಲು ಎನ್ನುವುದು ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಅನ್ನುವುದರ ಸೂಚನೆ. ಸೋಲನ್ನೇ ಇಂಧನವಾಗಿಸಿಕೊಳ್ಳುವ ತಾಳ್ಮೆ ಬೆಳೆಸಿಕೊಂಡು ಮುಂದೆ ಸಾಗುವಾ.

ಸೋಲು ಎನ್ನುವದು ಗೆಲುವಿನ ವಿರುದ್ಧ ಪದವಲ್ಲ. ಅದು ಗೆಲುವಿನ ಪಾಲುದಾರ. ಗೆಲುವಿಗೊಂದು ಚೆಲುವು ಬರುವುದೇ ಸೋಲಿನ ಸಾಂಗತ್ಯದಿಂದ.

ಹಸಿದು ಉಣ್ಣುವ ಊಟದೊಂದಿಗೆ ಸೋಲಿನ ನಂತರದ ಪಾಠವನ್ನೂ ಸೇರಿಸಿಕೊಂಡು ಸುಂದರ ಜೀವನಕ್ಕೆ ಬೇಕಾಗುವ ಅನುಭವವನ್ನು ದಕ್ಕಿಸಿಕೊಳ್ಳೋಣ.

kannada attitude quotes for status
kannada attitude quotes images

ಬದುಕೊಂದು ದೊರಕಿತ್ತು ಇನ್ಯಾರಿಗೊ ಬೆಳಕಾಗಲೆಂದು,ಆದರೆ  ಸಮಯ ಸರಿದು ಹೋಗುತ್ತಿದೆ ಕಾಗದದ ತುಂಡು ಗಳಿಸುವುದರಲ್ಲೆ. ಇಷ್ಟು ಹಣ ಪೇರಿಸಿ ಮಾಡುವುದೇನು? ಕೋನೆ ದಿರಿಸಿನಲ್ಲಿ ಜೇಬಿಲ್ಲ ಮಸನದಲ್ಲಿ ತಿಜೋರಿ ಇಲ್ಲ. ಇನ್ನು ಯಮನ ದೂತರೋ ಲಂಚ ಮುಟ್ಟುವುದಿಲ್ಲ

ಕನಸು ನನಸಾಗುವವರೆಗೆ ನಿದ್ದೆ ಬರದಂತೆ ನಿರಂತರ ಪ್ರಯತ್ನ ಅಗತ್ಯ. ಅದಿಲ್ಲವಾದರೆ ಕನಸು ಕೇವಲ ಹಂಬಲ ಅನ್ನುವಷ್ಟಕ್ಕೇ ಉಳಿದುಬಿಡುತ್ತದೆ.

Also read Attitude status in Hindi

ಬದುಕೊಂದು ದೊರಕಿತ್ತು ಇನ್ಯಾರಿಗೊ ಬೆಳಕಾಗಲೆಂದು,ಆದರೆ  ಸಮಯ ಸರಿದು ಹೋಗುತ್ತಿದೆ ಕಾಗದದ ತುಂಡು ಗಳಿಸುವುದರಲ್ಲೆ. ಇಷ್ಟು ಹಣ ಪೇರಿಸಿ ಮಾಡುವುದೇನು? ಕೋನೆ ದಿರಿಸಿನಲ್ಲಿ ಜೇಬಿಲ್ಲ ಮಸನದಲ್ಲಿ ತಿಜೋರಿ ಇಲ್ಲ. ಇನ್ನು ಯಮನ ದೂತರೋ ಲಂಚ ಮುಟ್ಟುವುದಿಲ್ಲ

Attitude Status Kannada

ಯಶಸ್ಸು ಏಕಾಏಕಿ ಘಟಿಸುವ ಪವಾಡವಲ್ಲ. ಶ್ರದ್ಧೆ, ಶ್ರಮಗಳಿದ್ದಲ್ಲಿ ಸ್ವಾಭಾವಿಕವಾಗಿ ಬಂದು ನಿಲ್ಲುವ ಸಂಗತಿ. ನಂಬಿಕೆಯಿಂದ ಶ್ರಮಿಸೋಣ.

ನೀವು ಹುಟ್ಟುವಾಗ ಏನೂ ಇರಲಿಲ್ಲ,ಆದ್ರೆ ಸಾಯುವಾಗ ನಿಮ್ಮ ಹೆಸರನಿಂದ ಸಾಯುತ್ತಿರಿ ನಿಮ್ಮ ಹೆಸರು ಕೇವಲ ಅಕ್ಷರಗಳಿಂದ ಮಾತ್ರ ಆಗಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.

ಬೇರೆಯವರಿಂದ ಅಳೆಯಲ್ಪಡುವ ಯಶಸ್ಸಿಗಿಂತ ನಮ್ಮದೇ ಅನುಭವಕ್ಕೆ ದಕ್ಕುವ ತೃಪ್ತಿ ಮುಖ್ಯ. ಹಾಗೆ ನೋಡಿದರೆ ತೃಪ್ತಿಯೇ ಯಶಸ್ಸು.

ಆಕಳು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ.ಮರ ತನ್ನ ನೆರಳನ್ನು ತಾನು ಅನುಭವಿಸುವದಿಲ್ಲ.ಜೀವನವೆಂದರೆ ನಮಗಾಗಿ ಬದುಕುವುದಲ್ಲ,ಬೇರೆಯವರಿಗಾಗಿಯೂ ಬದುಕಬೇಕು.ಅದುವೇ ಜೀವನ

ನಂಬಿಕೆಯೆನ್ನುವ ಮಿಣುಕು ದೀಪಕ್ಕೆ ಎಲ್ಲವನ್ನೂ ತೋರಿಸಲು ಸಾಧ್ಯವಾಗದಿದ್ದರೂ, ಮುಂದಿನ ಹೆಜ್ಜೆಯಿಡಲು ಸುರಕ್ಷಿತ ಸ್ಥಳವನ್ನು ತೋರಿಸಬಲ್ಲದು.

ಬೀಜ ಸಂಪೂರ್ಣವಾಗಿ ಯಾವಾಗ ತನ್ನನ್ನೇ ಮಣ್ಣಲ್ಲಿ ಕಳೆದುಕೊಳ್ಳುತ್ತದೋ ಆಗ ಮಾತ್ರ.ಅದು ಕುಡಿಯಿಟ್ಟು ಒಂದು ಮರವಾಗುತ್ತದೆ

ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಗಳ ಹದ ಮಿಶ್ರಣದಿಂದ ಕೈಗೊಂಡ ಕೆಲಸಗಳು ಫಲಪ್ರದವಾಗಿರುತ್ತವೆ. ಕೆಲಸಕ್ಕೆ ಮುನ್ನ ಸರಿಯಾದ ಯೋಜನೆಯಿರಲಿ.

ಯಾರಿಗೆ ಅಗತ್ಯಗಳೇ ಇರುವುದಿಲ್ಲವೋ ಅವರು ಮಾತ್ರ ಶ್ರೀಮಂತರಾಗಿರುತ್ತಾರೆ

2020 Kannada  WhatsApp Status

ವಿಚಾರವೇ ಇಲ್ಲದೆ ಮಾಡುವುದು ಮತ್ತು ಮಾಡದೇ ಬರೀ ವಿಚಾರ ಮಾಡುವುದು ಎಂಬೆರಡು ಸಂಗತಿಗಳೇ ನಮ್ಮ ಕುಂಠಿತಕ್ಕೆ ಮುಖ್ಯ ಕಾರಣಗಳು.

ಬಾರದು ಬಪ್ಪದು,ಬಪ್ಪದು ತಪ್ಪದು ಸರ್ವಜ್ಞ

ನಮ್ಮೆದುರು ಒಂದು ದಾರಿಯಿರಬೇಕಿತ್ತು ಎಂದು ಹಲುಬುತ್ತ ಕೂರುವ ಬದಲು ನಾವೇ ಅದನ್ನು ನಿರ್ವಿುಸಿಕೊಂಡು ಸಾಗಲು ಯತ್ನಿಸಬೇಕು.

ನಾನಾ ಸಾವುಗಳ ಸತ್ತು ಬದುಕುವುದೇ ಜೀವನ

Kannada WhatsApp Status And Quotes

ಎಲ್ಲ ನನಸುಗಳೂ ಪೂರ್ವಾಶ್ರಮದಲ್ಲಿ ಕನಸುಗಳೇ. ಕಾಣುವ ಕನಸಿಗೆ ಜಿಪುಣತನ ಬೇಡ. ಉತ್ತಮ ನನಸಿಗಾಗಿ ಪ್ರಯತ್ನ ಜಾರಿಯಲ್ಲಿರಲಿ.

ದೇಶ ಭಕ್ತಿಯಿಲ್ಲದವನು ಜೀವಂತವಾಗಿದ್ದರೂ ಮರಣಕ್ಕೆ ಸಮಾನ.
~ಡಾ.ಶಿವಕುಮಾರ ಸ್ವಾಮೀಜಿ

ದೊಡ್ಡ ಅವಕಾಶಗಳಿಗಾಗಿ ಕಾಯುವಾಗ ಸಣ್ಣ ಅವಕಾಶಗಳನ್ನು ಅಲಕ್ಷಿಸುವುದು ಸರಿಯಲ್ಲ. ಅವುಗಳನ್ನೇ ಸಮರ್ಪಕವಾಗಿ ಬಳಸಿ ಬೆಳೆಸಿಕೊಳ್ಳುವತ್ತ ಗಮನ ಹರಿಸೋಣ.

Also read New year wishes 2020

ಅನ್ನಬ್ರಹ್ಮನ ಸೃಷ್ಟಿ ಮಾಡುವ ವ್ಯವಸಾಯವೆಂಬುವುದು ಪವಿತ್ರ ವೃತ್ತಿ.
~ಡಾ.ಶಿವಕುಮಾರ ಸ್ವಾಮೀಜಿ

Best Kannada Quotes And  Status

ಆತಂಕಗಳು ನಮ್ಮನ್ನು ಆವರಿಸುವ ಮೊದಲೇ ಅವುಗಳನ್ನು ಗೆದ್ದೆವಾದರೆ ಬದುಕು ಮುಗಿಯುವ ಮುನ್ನವೇ ಸಮಯವನ್ನು ಸಾರ್ಥಕವಾಗಿ ಅನುಭವಿಸಲು ಸಾಧ್ಯವಾಗುತ್ತದೆ.

ದೃಷ್ಟಿ ಪವಿತ್ರವಾಗಿರಲಿ, ಭಾವ ಶುದ್ಧವಾಗಿರಲಿ, ಬದುಕು ಭಕ್ತಿಯಿಂದೊಡಗೂಡಿರಲಿ.
~ಡಾ.ಶಿವಕುಮಾರ ಸ್ವಾಮೀಜಿ

ತಪ್ಪು ಮಾಡುತ್ತ ಕಾಲ ಕಳೆದೆವಲ್ಲ ಎಂಬ ಹಳಹಳಿಕೆ ಬೇಡ. ಅದು ಏನೂ ಮಾಡದೇ ಕಳೆದ ಸಮಯಕ್ಕಿಂತ ಶ್ರೇಷ್ಠ.

ಗುರುಗಳ ಆಜ್ಞಾಪಾಲನೆಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಶಿಷ್ಯ ಅರುಣಿ !
ಹಿಂದೆ ಧೌಮ್ಯ ಎಂಬಋಷಿಗಳಿದ್ದರು. ಅವರೊಂದಿಗೆ ತುಂಬಾ ಶಿಷ್ಯಂದಿರಿದ್ದರು. ಅವರಲ್ಲಿ ಅರುಣಿ ಎಂಬ ಒಬ್ಬ ಶಿಷ್ಯನಿದ್ದನು. ಒಂದು ಸಲ ಜೋರಾಗಿ ಮಳೆ ಬರಲು ಶುರುವಾಯಿತು. ಹತ್ತಿರದಲ್ಲಿದ್ದ ಹೊಳೆಯ ನೀರು ಗದ್ದೆಗೆ ಹೋಗಬಾರದೆಂದು ಕಟ್ಟೆಯನ್ನು ಕಟ್ಟಲಾಗಿತ್ತು. ಮಳೆ ಜೋರಾಗಿ ಬಂದಿದ್ದರಿಂದ ಕಟ್ಟೆಯು ಒಡೆದು ಹೋಗುವ ಸ್ಥಿತಿಯಲ್ಲಿತ್ತು. ಆಗ ಗುರುಗಳು ಶಿಷ್ಯರಿಗೆ ಹೇಳಿದರು “ಹೋಗಿ, ಮಳೆಯ ನೀರು ಗದ್ದೆಗೆ ಹೋಗದಂತೆ ನೀರನ್ನು ತಡೆಯಿರಿ.”
ಅರುಣಿ ಮತ್ತು ಅನ್ಯ ಕೆಲವು ಶಿಷ್ಯರು ಕಟ್ಟೆಯನ್ನು ಸರಿ ಮಡಲು ಹೋದರು. ಕಟ್ಟೆಯನ್ನು ಸರಿ ಮಾಡಲು ಎಷ್ಟು ಪ್ರಯತ್ನ ಮಾಡಿದರೂ ನೀರು ತುಂಬಾ ರಭಸವಾಗಿದ್ದರಿಂದ ಅವರ ಪ್ರಯತ್ನಗಳೆಲ್ಲವೂ ವ್ಯರ್ಥವಾಯಿತು. ಕೊನೆಗೆ ಕಟ್ಟೆಯ ಒಂದು ಸಣ್ಣಭಾಗವು ಮುರಿದು ಬಿತ್ತು. ನೀರು ಸ್ವಲ್ಪ ಸ್ವಲ್ಪ ಗದ್ದಗೆ ಹೋಗಲು ಶುರುವಾಯಿತು. ಇಷ್ಟರಲ್ಲೇ ರಾತ್ರಿಯಾಗಿತ್ತು. ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಲ್ಲ ಶಿಷ್ಯರೂ ತಿರುಗಿ ಆಶ್ರಮಕ್ಕೆ ಬಂದರು. ದಿನವಿಡಿ ಕಷ್ಟಪಟ್ಟಿದ್ದರಿಂದ ಎಲ್ಲ ಶಿಷ್ಯರೂ ಕೂಡಲೇ ಗಾಢನಿದ್ರೆ ಮಾಡಿದರು. ಬೆಳಗ್ಗೆಯ ಹೊತ್ತಿಗೆ ಮಳೆ ನಿಂತಿತು. ಆಗ ಅವರಿಗೆ ತಿಳಿಯಿತು ಅರುಣಿಯು ಎಲ್ಲಿಯೂ ಕಾಣಿಸುತ್ತಿಲ್ಲವೆಂದು. ಅವರು ಅರುಣಿಯನ್ನು ಹುಡಕಿ ಸಿಗದಿದ್ದಾಗ ಗುರುಗಳ ಬಳಿಗೆ ಹೋಗಿ ಹೇಳಿದರು, “ಗುರುಗಳೇ, ಅರುಣಿಯು ಕಾಣಿಸುತ್ತಿಲ್ಲ.” ಆಗ ಗುರುಗಳು ಹೇಳಿದರು, “ನಾವು ಗದ್ದೆಗೆ ಹೋಗಿ ನೋಡೋಣ.” ಎಲ್ಲ ಶಿಷ್ಯರು ಮತ್ತು ಧೌಮ್ಯಋಷಿಗಳು ಗದ್ದೆಗೆ ಹೋಗಿ ನೋಡುತ್ತಾರೆ, ಕಟ್ಟೆಯು ಮುರಿದ ಜಾಗದಲ್ಲಿ ನೀರು ಗದ್ದೆಗೆ ಹೋಗದಂತೆ ನಿಲ್ಲಿಸಲು ಸ್ವತಃ ಅರುಣಿಯೇ ಕಟ್ಟೆಗೆ ಅಡ್ಡವಾಗಿ ಮಲಗಿದ್ದಾನೆ. ಇದನ್ನು ನೋಡಿ ಎಲ್ಲರೂ ದಂಗಾದರು. ರಾತ್ರಿ ಇಡೀ ಚಳಿ ಮಳೆಯಲ್ಲಿ, ಊಟವನ್ನೂ ಮಾಡದೇ ಮಲಗಿದ್ದ ಅರುಣಿಯನ್ನು ನೋಡಿ ಎಲ್ಲರಿಗೂ ಪ್ರೀತಿ ಎನಿಸಿತು. ಮಳೆ ನಿಂತಿದ್ದರಿಂದ ನೀರು ಕಡಿಮೆಯಾಗಿತ್ತು ಆದರೆ ಅರುಣಿಗೆ ಅಲ್ಲಿಯೇ ನಿದ್ದೆ ಬಂದಿತ್ತು. ಎಲ್ಲರೂ ಅರುಣಿಯ ಬಳಿಗೆ ಹೋಗಿ ಅವನನ್ನು ಎಬ್ಬಿಸಿದರು. ಗುರುಗಳು ಅರುಣಿಯ ಬಳಿಗೆ ಹೋಗಿ ಪ್ರೀತಿಯಿಂದ ಅವನ ತಲೆ ಸವರಿದರು. ಇದನ್ನು ನೋಡಿ ಎಲ್ಲ ಶಿಷ್ಯರ ಕಣ್ಣುಗಳಲ್ಲಿ ನೀರು ಬಂತು.
ಮಕ್ಕಳೇ, ಅರುಣಿ ಇಂದ ನಾವೇನು ಕಲಿಯಬಹುದು? ಗುರುಗಳು ಹೇಳಿದ್ದನ್ನು ಮಾಡಲೇಬೇಕೆಂಬ ತೀವ್ರ ತಳಮಳ. ಗುರುಗಳ ಆಜ್ಞಾಪಾಲನೆ ಮಾಡಲು ಅರುಣಿಯು ತನ್ನ ಸ್ವಂತದ ವಿಚಾರವನ್ನೂ ಮಾಡಲಿಲ್ಲ. ಅದಕ್ಕಾಗಿಯೇ ಅವನು ಗುರುಗಳ ಮೆಚ್ಚಿನ ಶಿಷ್ಯನಾಗಿದ್ದನು. ಇದಕ್ಕಾಗಿ ನಾವೂ ಕೂಡಾ ಗುರುಗಳಲ್ಲಿ ಬೇಡೋಣ, “ಹೇ ಗುರುದೇವಾ, ನಮಗೆ ಶಿಷ್ಯನ ಗುಣಗಳಾದ ಆಜ್ಞಾಪಾಲನೆಯನ್ನು ನೀಡಿರಿ”

Kannada WhatsApp Status And Quotes

ಸೂರದಾಸರು ಮತ್ತು ಕಸಗುಡಿಸುವವ
ಒಂದು ಕಾಲದಲ್ಲಿ ಸೂರದಾಸರೆಂಬ ಒಬ್ಬ ದೈವಭಕ್ತರಿದ್ದರು. ಅವರು ಅಧ್ಯಾತ್ಮವನ್ನು ಅಧ್ಯಯನ ಮಾಡಲು ಮತ್ತು ತಿಳಿದುಕೊಳ್ಳಲು ಜಿಜ್ಞಾಸುಗಳಾಗಿದ್ದರು. ಅವರು ಒಬ್ಬ ಗುರುಗಳ ಬಳಿಗೆ ಹೋಗಿ, ಭಗವಂತನ ಸಾಮೀಪ್ಯವು ದೊರೆಯಲು ತಮಗೆ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಮಾರ್ಗದರ್ಶನ ನೀಡಲು ಕೇಳಿಕೊಂಡರು.

Kannada WhatsApp Status And Quotes

ಸೂರದಾಸರಿಗೆ ತುಂಬಾ ಕೋಪ ಇದೆ ಎಂದು ಗುರುಗಳಿಗೆ ತಿಳಿದಿತ್ತು. ಈ ದೋಷವು ಸೂರದಾಸರನ್ನು ಭಗವಂತನೊಂದಿಗೆ ಒಂದಾಗಲು ಅಡ್ಡಿಯಾಗುತ್ತದೆ, ಆದ್ದರಿಂದ ತೀವ್ರವಾದ ಸಾಧನೆಯನ್ನು ಹೇಳಿಕೊಡುವ ಮೊದಲು ಅವರ ತಯಾರಿ ಮಾಡಬೇಕೆಂದು ನಿಶ್ಚಯಿಸಿದರು. ಗುರುಗಳು ಉತ್ತರಿಸಿದರು. ಆತ್ಮೀಯ ಸೂರದಾಸರೇ, ಇನ್ನು ಮುಂದಿನ ಒಂದು ತಿಂಗಳ ಕಾಲ ನೀವು ನಿಮ್ಮ ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡುತ್ತಿರಿ. ನಂತರ ಸ್ನಾನ ಮಾಡಿ ನನ್ನ ಬಳಿಗೆ ಪುನಃ ಬನ್ನಿರಿ.
ಅದರ ಮರುದಿನದಿಂದಲೇ ಸೂರದಾಸರು ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡಹತ್ತಿದರು. ಒಂದು ತಿಂಗಳ ನಂತರ ಅವರು ನದಿಗೆ ಹೋಗಿ ಸ್ನಾನ ಮಾಡಿದರು, ಗುರುಗಳನ್ನು ಭೇಟಿಯಾಗಲು ಹೊಸ ಬಟ್ಟೆಗಳನ್ನು ಧರಿಸಿಕೊಂಡರು. ಗುರುಗಳ ಆಶ್ರಮಕ್ಕೆ ಹೋಗುತ್ತಿರುವಾಗ ಮಾರ್ಗ ಮಧ್ಯೆ ಒಬ್ಬ ಕಸಗುಡಿಸುತ್ತಿರುವವನ ಅಲಕ್ಷ್ಯತನದಿಂದ ಅವರ ಬಟ್ಟೆಗಳು ಕೊಳೆಯಾದವು. ಸೂರದಾಸರು ಕೋಪಮಾಡಿಕೊಂಡು ಕಸಗುಡಿಸುವವನನ್ನು ಬೈದರು, “ನೀನೇನು ಮಾಡುತ್ತಿರುವೆ, ಮೂರ್ಖ? ನಾನೀಗ ಹಿಂತಿರುಗಿ ಹೋಗಿ ಬಟ್ಟೆಗಳನ್ನು ಒಗೆದು ಒಣಗಿಸಿಕೊಂಡು ಮತ್ತೆ ಸ್ನಾನ ಮಾಡಬೇಕು ಎಷ್ಟು ಸಮಯ ಹಾಳಾಗುತ್ತದೆ.”
ಗುರುಗಳು ಈ ಸನ್ನಿವೇಶವನ್ನು ಗಮನಿಸಿದರು. ಸೂರದಾಸರು ಆಶ್ರಮವನ್ನು ತಲುಪಿದ ಮೇಲೆ ಅವರು ಹೇಳಿದರು, “ಆತ್ಮೀಯ ಸೂರದಾಸರೇ, ನೀವು ಮುಂದಿನ ಸಾಧನೆಗೆ ಇನ್ನೂ ತಯಾರಾಗಿಲ್ಲ.” ಮುಂದಿನ ಒಂದು ತಿಂಗಳು ಕಾಲ ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡಿರಿ, ತಿಂಗಳು ಕಳೆದ ನಂತರ ಮತ್ತೆ ಸ್ನಾನ ಮಾಡಿ ನನ್ನನ್ನು ಭೇಟಿಯಾಗಲು ಬನ್ನಿರಿ.
ಸೂರದಾಸರು ಗುರುಗಳ ಆಜ್ಞೆಯನ್ನು ಒಪ್ಪಿಕೊಂಡು ನಿತ್ಯದ ಎಲ್ಲ ಚಟುವಟಿಕೆಗಳನ್ನು ಮಾಡುತ್ತಿರುವಾಗಲೂ ಭಗವಂತನ ನಾಮಜಪವನ್ನು ಮಾಡಲು ಮರಳಿ ಹೋದರು. ಆ ತಿಂಗಳು ಕಳೆದ ನಂತರ ಆಶ್ರಮಕ್ಕೆ ಉತ್ಸಾಹದಿಂದ ಹೋಗುತ್ತಿರುವಾಗ, ಮತ್ತದೇ ಘಟನೆ ಜರುಗಿತು. ಈ ಸಲ ಕಸಗುಡಿಸುತ್ತಿದ್ದವನು ಅಕಸ್ಮಾತ್ತಾಗಿ ತನ್ನ ಹೊಲಸಾದ ಪೊರಕೆಯನ್ನು ಸೂರದಾಸರ ಮೈಮೇಲೆ ತಾಗಿಸಿದನು. ಮತ್ತೆ ಸೂರದಾಸರು ಕಸಗುಡಿಸುತ್ತಿದ್ದವನ ಮೇಲೆ ಸಿಟ್ಟು ಮಾಡಿಕೊಂಡರು, ಗುರುಗಳು ಅವರನ್ನು ಮರಳಿ ಕಳುಹಿಸಿದರು ಮತ್ತು ಇನ್ನೊಂದು ತಿಂಗಳ ಕಾಲ ಭಗವಂತನ ನಾಮಜಪವನ್ನು ಮಾಡಲು ಹೇಳಿದರು.
ಹೀಗೆ ಮೂರು ತಿಂಗಳು ಕಳೆದ ಮೇಲೆ, ಸೂರದಾಸರು ಗುರುಗಳನ್ನು ಕಾಣಲು ಹೋಗುತ್ತಿದ್ದರು, ಆಗ ಅಸಾಮಾನ್ಯವಾದ ಘಟನೆ ಜರುಗಿತು. ಕಸಗುಡಿಸುವವನು ಸೂರದಾಸರು ಬರುತ್ತಿರುವುದನ್ನು ನೋಡಿದನು. ತಾನು ಮಾಡಿದ್ದು ಅಕಸ್ಮಾತ್ ಆಗಿ ಘಟಿಸಿದ ಕೃತ್ಯವಾಗಿತ್ತು, ಆದರೂ ಕೂಡ ಸೂರದಾಸರು ತನ್ನನ್ನು ಬೈದದ್ದನ್ನು ನೆನಪುಮಾಡಿಕೊಂಡನು. ಸೂರದಾಸರು ಹೊಸ ಬಟ್ಟೆಗಳನ್ನು ಧರಿಸಿದ್ದನ್ನು ಕಸಗುಡಿಸುವವನು ನೋಡಿದನು. ಈ ಸಲ ಸೂರದಾಸರು ಏನಾದರೂ ಮಾಡುವುದು ಅಥವಾ ಹೇಳುವುದಕ್ಕಿಂತ ಮೊದಲೇ ಸೂರದಾಸರ ಮೇಲೆ ಕ್ರುದ್ಧಗೊಂಡಿದ್ದ ಕಸಗುಡಿಸುವವನು ಉದ್ದೇಶಪೂರ್ವಕವಾಗಿ ತನ್ನ ಕಸದ ತೊಟ್ಟಿಯಲ್ಲಿದ್ದ ಎಲ್ಲ ಕಸವನ್ನು ಸೂರದಾಸರ ತಲೆಯ ಮೇಲೆ ಸುರಿದುಬಿಟ್ಟನು.
ಆದರೆ ಈ ಸಲ, ಸೂರದಾಸರು ತಮ್ಮ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾ ಹೇಳಿದರು ನಾನು ನಿನಗೆ ಕೃತಜ್ಞನಾಗಿದ್ದೇನೆ. ನೀನೆ ನನ್ನ ಗುರು. ನೀನು ನನಗೆ ಕೋಪವೆಂಬ ದೋಷದಿಂದ ಹೊರಗೆ ಬರಲು ಕಲಿಸಿರುವಿ. ಆ ಕಸಗುಡಿಸುವವನು ಆಶ್ಚರ್ಯಚಕಿತನಾದನು ಮತ್ತು ನಾಚಿಕೆಯಿಂದ ತನ್ನ ತಲೆ ತಗ್ಗಿಸಿದನು.
ಈ ಸಲ, ಸೂರದಾಸರು ಗುರುಗಳ ಆಶ್ರಮವನ್ನು ತಲುಪಿದಾಗ ಗುರುಗಳು ಅವರಿಗೋಸ್ಕರ ಕಾಯುತ್ತಿದ್ದರು. ಗುರುಗಳು ಸಂತೋಷಭರಿತರಾಗಿ ತಾಯಿಯು ತನ್ನ ಮಗುವು ಏನಾದರೂ ಸಾಧನೆ ಮಾಡಿದಾಗ ಅದರ ಬೆನ್ನುತಟ್ಟುವಂತೆ ಸೂರದಾಸರ ತಲೆಯಮೇಲೆ ಕೈಯಾಡಿಸಿದರು.
ಒಂದು ತಿಂಗಳು ಕಾಲ ಮಾಡಿದ ಪ್ರಯತ್ನದ ನಂತರ ಸೂರದಾಸರು ಉತ್ಸುಕರಾಗಿ ತಮ್ಮ ಗುರುಗಳ ಬಳಿಗೆ ಹೋಗುತ್ತಿರುವಾಗ ಸೂರದಾಸರು ಅಕಸ್ಮಾತ್ತಾಗಿ ಮಾರ್ಗ ಮಧ್ಯ ಎದುರಾದ ಕಸಗುಡಿಸುತ್ತಿದ್ದವನಿಂದ ಹೇಗೆ ಕಿರಿಕಿರಿ ಅನುಭವಿಸಿದರು ಎಂದು ನಾವು ಕಲ್ಪಿಸಿಕೊಳ್ಳಬಹುದು. ನಮ್ಮ ಜೀವನದಲ್ಲಿಯೂ ಕೂಡ ನಾವು ಕೋಪಗೊಳ್ಳುವಂತೆ ಮಾಡುವ ಇಂತಹ ಬಹಳಷ್ಟು ಪ್ರಸಂಗಗಳನ್ನು ಎದುರಿಸಿರುತ್ತೇವೆ.
ಮೇಲಿನ ಕಥೆಯು ನಮಗೆ ತಿಳಿಸಿದಂತೆ, ಮೂರು ತಿಂಗಳುಗಳ ಕಾಲ ಸೂರದಾಸರು ಭಗವಂತನ ನಾಮಜಪವನ್ನು ಮಾಡಿದ್ದರಿಂದ ಮತ್ತು ಗುರುಗಳ ಆಜ್ಞೆಯನ್ನು ಪಾಲಿಸಿದ್ದರಿಂದ ಕ್ರೋಧದಿಂದ ಸಂಪೂರ್ಣವಾಗಿ ಹೊರಗೆ ಬಂದರು. ಕ್ರೋಧದಿಂದ ಹೊರಗೆ ಬರಲು ಸಹಾಯ ಮಾಡಿದ ಕಸಗುಡಿಸುವವನನ್ನು ಅವರು ಗುರುವೆಂದು ತಿಳಿದರು. ನಾವೂ ಕೂಡ ಎಲ್ಲ ಪ್ರಸಂಗಗಳನ್ನು ನಮ್ಮ ದೋಷಗಳನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳಿಂದ ಹೊರಗೆ ಬರಲು ಸದವಕಾಶ ಎಂಬ ದೃಷ್ಟಿಕೋನದಿಂದ ನೋಡಬೇಕು. ಇದು ಕೇವಲ ಭಗವಂತನ ನಾಮಸ್ಮರಣೆಯಿಂದ ಸಿಗುವ ಬಲದಿಂದ ಮಾತ್ರ ಸಾಧ್ಯವಾಗುತ್ತದೆ.

ಕನಸುಗಳೊಂದಿಗೆ ಗುರಿ ತಲುಪುವ ಮಾರ್ಗದಲ್ಲಿ ಶ್ರಮ ಮತ್ತು ಶ್ರದ್ಧೆ ಪಾತ್ರ ದೊಡ್ಡದು. ಅವುಗಳ ಕೊರತೆಯಾದರೆ ಕನಸು ಕೊನೆಗೂ ಕನಸೇ.

ಕ್ಷಮಿಸು? ಕಾಲವೇ ನಿನ್ನೊಂದಿಗೆ ನಿನ್ನಂತೆ ಬದುಕಲು ನನಗಿಷ್ಟವಿಲ್ಲ ?
ಪ್ರತಿ ದಿಕ್ಕು ದಿಕ್ಕುಗಳಲ್ಲಿ ಏಳೇಳು ವರ್ಣದಂತೆ ಊಸರವಳ್ಳಿ ಬಣ್ಣಕ್ಕೆ ತಿರುಗಲುಸಾಧ್ಯವಿಲ್ಲ. ಯಾಕೆಂದರೆ ನಾ ನಿನ್ನಂತಲ್ಲ?
ನಾ ಯಾರಿಗಾಗಿಯೂ ಅಲ್ಲ.?
ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ..!
ನಾ ಬರೆದದ್ದು ನನ್ನ ಮನದ ಭಾವವನ್ನು.?
ಯಾರೂ ಮೆಚ್ಚಬೇಕಿಲ್ಲ ನನ್ನ ಬರಹವನ್ನು.?

ನಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿನಿಯೋಗಿಸದೇ ಯಶಸ್ಸನ್ನು ನಿರೀಕ್ಷಿಸಬಾರದು. ಶಕ್ತಿಯ ಜೊತೆ ಪ್ರಾಮಾಣಿಕ ಪ್ರಯತ್ನವೂ ಇರಲಿ!

Kannada Quotes

#Call ಮಾಡ್ತಾಳೆ ಅಂತ ಕಾದು ಕಾದು ಅಳೋದಕ್ಕಿಂತ?ಕೂಳ್  ತಿಂದ್ ಬಿದ್ಕೊಳೋದ್ ಎಷ್ಟೋ ಮೇಲು???✌

ಕಳೆದ ದಿನಗಳನ್ನು ಅವಲೋಕಿಸಿದಾಗಲೆಲ್ಲ ಸಮಾಧಾನ ಹೊಂದಲು ಸಾಧ್ಯವಾಗುವಂತೆ ನಮ್ಮ ಇಂದಿನ ಕೆಲಸ ಶ್ರದ್ಧೆ ವಿಶ್ವಾಸದಿಂದ ಕೂಡಿರಲಿ!

ಈ ಜೀವನ ಬೇಸತ್ತು ಹೋಗಿದೆ,?
ಹೌದೌದು ಅಂಡು ಬಗ್ಗಿಸದೇ ಕ್ಯಾಮೆ ಮಾಡದ ಹೆತ್ಲಾಂಡಿಗಳ್ ಇದ್ರೆ ಇನ್ನೇನಾಗುತ್ತೆ.!?✍

ಸಣ್ಣ ಸಣ್ಣ ಸಂಗತಿಗಳಲ್ಲೂ ವಿಶ್ವಾಸವಿಡಬೇಕು. ನಮ್ಮ ಶಕ್ತಿಯ ಮೂಲವಿರುವುದೇ ಅಲ್ಲಿ. ಯಾವುದನ್ನೂ ಅಲಕ್ಷಿಸದ ಸಮಗ್ರ ದೃಷ್ಟಿಯೇ ಯಶಸ್ಸಿನ ಕೀಲಿ!

ಸಂಸಾರಿ ಜೊತೆ ಕಲಿತು ಸನ್ಯಾಸಿ ಕೆಟ್ಟ ಅಂದಹಾಗೇ,
ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್
ಹಾಳಾಯಿತು..??

Also read Attitude Status in Marathi

ದೃಷ್ಟಿ ಆಕಾಶದಲ್ಲಿರುವ ನಕ್ಷತ್ರಗಳತ್ತ ಇರುವಾಗಲೂ ಕಾಲು ಮಾತ್ರ ನೆಲದಲ್ಲಿರಲಿ. ನಮ್ಮ ಸ್ಥಾನಮಾನಗಳು ಮೂಲವನ್ನು ಮರೆಸುವಂತಿರಬಾರದು!

Kannada WhatsApp Status And Quotes

ತಾತನ ಸೋಲಿಗೆ ನೊಂದು ಸಂಸದ ಸ್ಥಾನಕ್ಕೆ ರಾಜನಾಮೆ ನೀಡುವಂತಿದ್ದರೆ..
ಸುಮ್ಮನೆ ನಮ್ಮ ಟ್ಯಾಕ್ಸ್ ದುಡ್ಡು ಯಾಕಪ್ಪಾ ಹಾಳು ಮಾಡ್ದೆ..

ಜಾತಕ, ರೇಖೆ ಇತ್ಯಾದಿಗಳನ್ನು ನಂಬಿ ಕೂರುವುದಲ್ಲ. ಹಸ್ತವೇ ಇಲ್ಲದವನಿಗೂ ಭವಿಷ್ಯವಿದೆ. ಶ್ರಮ, ಶ್ರದ್ಧೆಗಳಲ್ಲಿ ವಿಶ್ವಾಸವಿರಲಿ!

ಮಳೆ ನಿಂತ್ರು ಮರದ ಹನಿ ನಿಲ್ಲಲ್ಲ ಅಂತಾರಲ್ಲ ಹಾಗೇ..
ನಮ್ಮ ಕಲಬುರಗಿಯಲ್ಲಿ ಸೂರ್ಯ ಮುಳುಗಿದರು ಬಿಸಿಲಿನ ಶಾಖ ಕಡಿಮೆ ಆಗ್ತಿಲ್ಲ..?

ನಾವೆಷ್ಟು ದೂರ ಸಾಗಿದೆವು ಎಂಬ ಕುತೂಹಲದಿಂದ ಹಿಂತಿರುಗಿ ನೋಡುತ್ತ ಕ್ರಮಿಸಲು ಉಳಿದಿರುವ ಅಂತರದ ಅಂದಾಜು ದಕ್ಕಿಸಿಕೊಳ್ಳುತ್ತ ಸಾಗಬೇಕು!

ನಾನು ಇವಾಗ್ಲೆ ಗುಡ್ ನೈಟ್ ಹೇಳಲ್ಲ ಯಾಕಂದ್ರೆ ನಾನು ಈಗ್ಲೆ ಮಲಗಲ್ಲ..?

Keywords

kannada attitude quotes for status
kannada attitude quotes images

ಯಶಸ್ಸು ಅಂತರಂಗಕ್ಕೆ ಪ್ರವೇಶಿಸಿ ಅಪ್ಪಿಕೊಳ್ಳುತ್ತದೆ. ಆದರೆ ಸೋಲು ಸಾರ್ವಜನಿಕವಾಗಿ ನಮ್ಮನ್ನು ಬೆತ್ತಲೆಗೊಳಿಸಿಬಿಡಬಹುದು. ಸೋಲಿನೊಂದಿಗೆ ಸೆಣಸುವಾಗ ಎಚ್ಚರ ಅಗತ್ಯ!

ನಾನು ಇವಾಗ್ಲೆ ಗುಡ್ ನೈಟ್ ಹೇಳಲ್ಲ ಯಾಕಂದ್ರೆ ನಾನು ಈಗ್ಲೆ ಮಲಗಲ್ಲ..?

ಪ್ರೀತಿಸ್ತ್ಬೇಕು ಒಬ್ಳನ್ನ ??
ಮರಿಬೇಕು ಇನ್ನೋಬ್ಳನ್ನ
??????????

Click here to next Page

Leave a comment

close
DMCA.com Protection Status